newsics.com
ವಾಷಿಂಗ್ಟನ್ : ಅಮೆರಿಕದ ಪ್ರೌಢಶಾಲೆಯೊಂದರಲ್ಲಿ ಸ್ಮಾರ್ಟ್ ಫೋನ್ಗಳ ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಇದು ಧನಾತ್ಮಕ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು ಹೆಚ್ಚು ಸಂತೋಷದಿಂದ ಇರುವುದು ಕಂಡು ಬಂದಿದೆ. ಇದರ ಜತೆಗೆ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಮೊಬೈಲ್ ನಿಷೇಧಿಸಿದ ಬಳಿಕ ಶಾಲೆಯಲ್ಲಿ ಕಂಡು ಬಂದ ಬೆಳವಣಿಗೆ ಕುರಿತಂತೆ ವರದಿ ಮಾಡಿದೆ. ಮೆಸ್ಸಾಚುಸೆಟ್ಸ್ನಲ್ಲಿರುವ ಬುಕ್ಸಟನ್ ಸ್ಕೂಲ್ ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಕೊರೋನಾ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಮರಳಿದಾಗ ಮೊಬೈಲ್ ಫೋನ್ ಗೆ ಹೆಚ್ಚು ಕಡಿಮೆ ಒಗ್ಗಿ ಹೋಗಿದ್ದರು. ಅತೀಯಾಗಿ ಫೋನ್ ಬಳಸುತ್ತಿದ್ದರು.
ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದನ್ನು ಕೂಡ ಮರೆತಂತೆ ಕಂಡು ಬರುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ಶಾಲೆಯಲ್ಲಿ ಸ್ಮಾರ್ಟ್ ಫೋನ್ ಬಳಕೆ ನಿಷೇಧಿಸಲು ನಿರ್ಧರಿಸಿತ್ತು.
114 ಎಕರೆ ವಿಶಾಲವಾದ ಶಾಲಾ ಆವರಣದಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಫೋನುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಶಾಲೆಯ ಕೌಂಟರ್ಗಳಲ್ಲಿ ಇರಿಸಿ ತರಗತಿಗೆ ತೆರಳಬೇಕಾಗಿದೆ.