newsics.com
ಬೆಲ್ಜಿಯಂ: ಮಂಕಿಪಾಕ್ಸ್ ಪ್ರಕರಣಗಳು ಬೆಲ್ಜಿಯಂನಲ್ಲಿ ಪತ್ತೆಯಾಗಿದ್ದು, 21 ದಿನಗಳ ಕ್ವಾರಂಟೈನ್ ನ್ನು ಕಡ್ಡಾಯಗೊಳಿಸಿದೆ.
ಈಗಾಗಲೇ 14 ದೇಶಗಳು ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದ್ದು, ಬೆಲ್ಜಿಯಂನಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದೆ. ಮತ್ತು ಕ್ವಾರಂಟೈನ್ ಕಡ್ಡಾಯಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.
ಈ ವೈರಲ್ ಕಾಯಿಲೆಯು ಸಿಡುಬಿನಂತೆ ಕಂಡರೂ ಇದರ ಲಕ್ಷಣಗಳು ಸೌಮ್ಯವಾಗಿರುತ್ತದೆ.ಎರಡರಿಂದ ನಾಲ್ಕು ವಾರಗಳಲ್ಲಿ ಜನರು ಚೇತರಿಸಿಕೊಳ್ಳುತ್ತಾರೆ. ಆಸ್ಪತ್ರೆಗೆ ಸೇರಿಸುವ ಅಗತ್ಯತೆ ಇರುವುದಿಲ್ಲ. ಸಿಡುಬಿಗೆ ನೀಡುತ್ತಿದ್ದ ಲಸಿಕೆಯನ್ನೇ ಮಂಕಿಪಾಕ್ಸ್ ಗೆ ಅನುಮೋದಿಸಲಾಗಿದೆ.