Thursday, December 2, 2021

13.5 ಕೆಜಿ ತೂಕದ ಚಂದ್ರಶಿಲೆ 18.74 ಕೋಟಿ ರೂ.ಗೆ ಹರಾಜು!

Follow Us

ಲಂಡನ್: ಚಂದ್ರಶಿಲೆಯ ತುಣುಕೊಂದು ಬರೋಬ್ಬರಿ 18.74 ಕೋಟಿ ರೂ.ಗೆ ಹರಾಜಾಗಿದೆ.
ಈ ತುಣುಕು ಸುಮಾರು 13.5 ಕಿಲೋ ತೂಕವಿದ್ದು, ಭೂಮಿ ಮೇಲೆ ಲಭ್ಯವಿರುವ 5ನೇ ಅತಿದೊಡ್ಡ ಚಂದ್ರಶಿಲೆ ಇದಾಗಿದೆ ಎಂದು ಹೇಳಲಾಗಿದೆ.
ಸಹರಾ ಮರುಭೂಮಿಯಲ್ಲಿ ಪತ್ತೆಯಾಗಿದ್ದ ಈ ಶಿಲೆಯನ್ನು ಅನಾಮಿಕನೊಬ್ಬ ಬ್ರಿಟನ್ನಿನ ಪ್ರಸಿದ್ಧ ಹರಾಜು ಸಂಸ್ಥೆ ಕ್ರಿಸ್ಟಿಗೆ ಒಪ್ಪಿಸಿದ್ದ. ಈಗ ಇದು ಬೃಹತ್‌ ಮೊತ್ತಕ್ಕೆ ಹರಾಜಾಗುವ ಮೂಲಕ ಖಾಸಗಿ ಸಂಸ್ಥೆಯೊಂದರ ಪಾಲಾಗಿದೆ.
ಫ‌ುಟ್ಬಾಲ್‌ಗಿಂತ ತುಸು ಕಡಿಮೆ ಗಾತ್ರದ ಈ ಶಿಲೆ, 4.5 ಬಿಲಿಯನ್‌ ವರ್ಷಗಳಷ್ಟು ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಭೂಮಿ ಮೇಲೆ 650 ಕಿಲೋ ತೂಕದ ಚಂದ್ರನ ಶಿಲೆಗಳು ಇವೆ ಎಂದು ಅಂದಾಜಿಸಲಾಗಿದೆ. ಚಂದ್ರನ ಮೇಲ್ಮೈಗೆ ಉಲ್ಕೆ ಅಪ್ಪಳಿಸಿ ಈ ಶಿಲೆ, ಭೂಮಿಗೆ ಬಿದ್ದಿರಬಹುದು ಎಂದು ಊಹಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...
- Advertisement -
error: Content is protected !!