newsics.com
ಕ್ಯಾಲಿಫೋರ್ನಿಯಾ(ಅಮೆರಿಕ): ಮನೆಯ ಅಡಿಯಲ್ಲಿ 90ಕ್ಕೂ ಹೆಚ್ಚು ವಿಷಸರ್ಪಗಳು ಪತ್ತೆಯಾಗಿರುವ ಘಟನೆ ಅಮೇರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಹಾವುಗಳನ್ನು ಕಂಡ ಮಹಿಳೆ, ತಕ್ಷಣ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಮನೆಗೆ ಧಾವಿಸಿದ ಉರಗ ತಜ್ಞರು ಹಾವುಗಳನ್ನು ರಕ್ಷಿಸಿದ್ದಾರೆ. ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಉರಗ ತಜ್ಞರು ಹಾವುಗಳನ್ನು ಹುಡುಕಿ ರಕ್ಷಿಸಿದ್ದಾರೆ.
ಮೊದಲಿಗೆ 22 ದೊಡ್ಡ ಹಾವುಗಳು ಮತ್ತು 59 ಮರಿ ಹಾವುಗಳು ಪತ್ತೆಯಾಗಿದ್ದವು. ಮತ್ತೊಮ್ಮೆ ಕಾರ್ಯಾಚರಣೆ ನಡೆಸಿದಾಗ 11 ಹಾವುಗಳು, ಸತ್ತ ಬೆಕ್ಕು ಹಾಗೂ ಸತ್ತ ಇಲಿ ಸಿಕ್ಕಿದೆ.