newsics.com
ಮಕೇ; ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ (27) ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದ ಮಿಸ್ ಕೊರಿಯಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಟಾನ್ಸಿಲ್ ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.