ಲಾಹೋರ್: ಪಾಕಿಸ್ತಾನದ ಪ್ರಮುಖ ಟಿವಿ ಚಾನೆಲ್ `ಡಾನ್’ ಚಾನೆಲ್’ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ. ಅಷ್ಟೇ ಅಲ್ಲ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂದು ಶುಭ ಕೋರಲಾಗಿದೆ.ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಪಾಕಿಸ್ತಾನದ ಚಾನೆಲ್ ಪರದೆ ಮೇಲೆ ಮಧ್ಯಾಹ್ನ 3.30ರ ಸುಮಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರುವ ಸಂದೇಶ ಪ್ರಕಟವಾಗಿದ್ದು, ತ್ರಿವರ್ಣ ಧ್ವಜ ಕಾಣಿಸಿಕೊಂಡಿದೆ. ಸುದ್ದಿ ವಾಹಿನಿ ಜಾಹಿರಾತು ಪ್ರಸಾರ ಮಾಡುತ್ತಿದ್ದ ಮಧ್ಯದಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜತೆ ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ. ಡಾನ್ ಚಾನೆಲ್ ನಲ್ಲಿ ಪ್ರಕಟವಾದ ಭಾರತದ ತ್ರಿವರ್ಣ ಧ್ವಜದ ಫೋಟೊ ಹಾಗೂ ವೀಡಿಯೋ ದೃಶ್ಯಗಳು ಇದೀಗ ಟ್ವಿಟರ್’ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜಾಹೀರಾತು ಪ್ರಕಟಿಸುತ್ತಿದ್ದಾಗ ಏಕಾಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿ ಕೆಲ ಸಮಯದ ನಂತರ ಕಾಣೆಯಾಯಿತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು.
ಪಾಕ್ ಟಿವಿ ‘ಡಾನ್’ ಚಾನೆಲ್’ನಲ್ಲಿ ಭಾರತದ ತ್ರಿವರ್ಣ ಧ್ವಜ!
Follow Us