newsics.com
ಕಟ್ಮಂಡು/ನವದೆಹಲಿ: ಉತ್ತರಾಖಂಡದ ಮೂರು ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಓಲೈಸುವ ಪ್ರಯತ್ನಕ್ಕೆ ನೇಪಾಳ ಕೈಹಾಕಿದೆ.
ನೇಪಾಳ ಗಡಿಯಲ್ಲಿರುವ ಭಾರತ ಆಡಳಿತವಿರುವ ಹಳ್ಳಿಗಳ ಮೇಲೆ ಹಕ್ಕು ಸಾಧಿಸುವ ಸಲುವಾಗಿ ಕುಟಿ, ನಭಿ ಮತ್ತು ಗುಂಜಿ ಗ್ರಾಮದ ಜನರಿಗೆ ಹಣ, ಭೂಮಿ ಮತ್ತು ಮನೆಗಳನ್ನು ಕಟ್ಟಿಸಿಕೊಡುವುದರ ಜತೆಗೆ ನೇಪಾಳದ ಪೌರತ್ವ ಕೊಡುವುದಾಗಿ ನೇಪಾಳ ಸರ್ಕಾರ ಭರವಸೆ ನೀಡಿದೆ.
ಕಳೆದ ಕೆಲವು ದಿನಗಳಿಂದ ನೇಪಾಳ ಸರ್ಕಾರಕ್ಕಾಗಿ ಕೆಲಸ ಮಾಡುವ ಏಜೆಂಟರು ಕುಟಿ, ನಭಿ ಮತ್ತು ಗುಂಜಿ ಗ್ರಾಮದಲ್ಲಿ ವಾಸಿಸುವವರ ಜತೆ ಸಂಪರ್ಕದಲ್ಲಿದ್ದಾರೆ. ಇದು ಕಾಲಾಪಾನಿ ಪ್ರದೇಶದಿಂದ 26 ಕಿಲೋಮೀಟರ್ ದೂರದಲ್ಲಿದೆ. ನೇಪಾಳ, ಭಾರತ, ಚೀನಾ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಚೀನಾದ ಸೇನೆಯು ನೇಪಾಳ ಪ್ರದೇಶದ ಕೆಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿದೆ ಎಂದು ತಿಳಿದುಬಂದಿದೆ.
ಎಲ್‌ಎಸಿಯಲ್ಲಿ ಭಾರತವು ಚೀನಾದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಸಮಯವೇ ಸೂಕ್ತ ಎಂದು ಭಾವಿಸಿರುವ ನೇಪಾಳ ಮೂರು ಹಳ್ಳಿಗಳ ಮೇಲೆ ಪ್ರಭುತ್ವ ಸಾಧಿಸಲು ಮುಂದಾಗಿದೆ. ಕೈಲಾಸ ಪರ್ವತದ ಸಮೀಪ ಚೀನಾ ತನ್ನ ಮಿಲಿಟರಿ ನೆಲೆಗಳನ್ನು ವಿಸ್ತರಿಸಲು ನೇಪಾಳ ಸೇನೆಯು ನೆರವಾಗುತ್ತಿದ್ದು, ನೇಪಾಳದ ಪ್ರತಿ ನಡೆಯ ಹಿಂದೆ ಚೀನಾ ಇದೆ ಎನ್ನಲಾಗುತ್ತಿದೆ.
ಭಾರತದ ಮೂರು ಹಳ್ಳಿ ಕಬಳಿಸಲು ನೇಪಾಳ ಕಸರತ್ತು
Follow Us