ಕಾಠ್ಮಂಡು: ನೇಪಾಳ ರಾಜಧಾನಿ ಕಾಠ್ಮಂಡು ಸಮೀಪ ರೆಸಾರ್ಟ್ ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಎಂಟು ಕೇರಳಿಯರ ಮೃತದೇಹ ಇನ್ನೂ ಅಲ್ಲಿಯೇ ಇದೆ. ಮೃತದೇಹ ಹೊತ್ತೊಯ್ಯಲು ವಿಮಾನ ಸಾಗಟ ವೆಚ್ಚ ಹತ್ತು ಲಕ್ಷ ರೂಪಾಯಿ ತಗುಲಲಿದೆ. ಆದರೆ ಕಾಠ್ಮಂಡುವಿನಲ್ಲಿ ರುವ ಭಾರತೀಯ ದೂತವಾಸ ಕಚೇರಿ ಇಷ್ಟು ಹಣ ನೀಡಲು ನಿರಾಕರಿಸುತ್ತಿದೆ ಎಂದು ವರದಿಯಾಗಿದೆ. ವಿದೇಶಾಂಗ ಇಲಾಖೆಯಿಂದ ಈ ಕುರಿತಂತೆ ಯಾವುದೇ ಸೂಚನೆ ಬಂದಿಲ್ಲ. ಆದುದರಿಂದ ಆರ್ಥಿಕ ನೆರವು ನೀಡಲು ಸದ್ಯಕ್ಕೆ ಅಸಮರ್ಥರಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ಮೃತದೇಹಗಳನ್ನು ಸ್ವದೇಶಕ್ಕೆ ತರಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದ್ದು, ಸೂಕ್ತ ಕ್ರಮಕ್ಕಾಗಿ ಸಂಬಂಧಿಕರು ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ