newsics.com
ಟೆನ್ನೆಸ್ಸೀ(ಅಮೆರಿಕ): ಟೆನ್ನೆಸ್ಸೀಯ ಫರಗುಟ್ನಲ್ಲಿ ಕಾಣಿಸುವ ವೈಟ್ಟೇಲ್ ಜಿಂಕೆಗಳ ಎರಡೂ ಕಣ್ಣುಗುಡ್ಡೆಗಳಿಂದ ದಪ್ಪ ಕೂದಲು ಬೆಳೆಯುತ್ತಿದೆ.
ಡರ್ಮಾಯ್ಡ್ ಎಂದು ಕರೆಯಲ್ಪಡುವ ಈ ಕಾಯಿಲೆ ಸಾಮಾನ್ಯವಾಗಿ ಜಿಂಕೆಯ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಜಿಂಕೆಯ ಕಣ್ಣಿನ ಗುಡ್ಡೆಯ ಮೇಲೆ ಕೂದಲು ಬೆಳೆದಿದೆ.
ಅದರ ಕಣ್ಣಿನ ಗುಡ್ಡೆಗಳ ಮಾಂಸದ ಗುಡ್ಡೆಯ ಮೇಲೆ ಕೂದಲು ಚಾಚಿಕೊಂಡಿರುತ್ತದೆ. ಕಣ್ಣಿನ ಪಾರದರ್ಶಕ ಭಾಗವನ್ನು ಮುಚ್ಚುವ ಇದನ್ನು ಕಾರ್ನಿಯಲ್ ಡರ್ಮಾಯ್ಡ್ಸ್ಎಂದು ಕರೆಯಲ್ಪಡುವ ವಿಲಕ್ಷಣ ಸ್ಥಿತಿ ಎನ್ನುತ್ತಾರೆ. ಟೆನ್ನೆಸ್ಸೀ ರಾಜ್ಯದಲ್ಲಿ ಕೇವಲ ಒಂದು ವೈಟ್ಟೇಲ್ನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.
ಈ ಜಿಂಕೆಗೆ ಎಪಿಜೂಟಿಕ್ ಹೆಮರಾಜಿಕ್ ಕಾಯಿಲೆಯನ್ನು ಪರೀಕ್ಷೆ ಮಾಡಿದಾಗ (ಇಎಚ್ಡಿ) ಪಾಸಿಟಿವ್ ಬಂದಿದೆ. ಇದು ಜ್ವರ, ತೀವ್ರ ಅಂಗಾಂಶಗಳ ಸೆಳೆತ ಮತ್ತು ಮನುಷ್ಯರ ಭಯವನ್ನು ಕಳೆದುಕೊಳ್ಳುತ್ತದೆ ಎಂದು ಕಾರ್ನೆಲ್ ವನ್ಯಜೀವಿ ಆರೋಗ್ಯ ಪ್ರಯೋಗಾಲಯ ತಿಳಿಸಿದೆ. ಆದರೂ ಜಿಂಕೆಯ ಕಣ್ಣುಗಳ ಕೂದಲು ಏಕೆ ಬೆಳೆದವು ಎಂಬುದನ್ನು ಪತ್ತೆಹಚ್ಚಲು ತಜ್ಞರಿಗೆ ಇನ್ನೂ ಸಾಧ್ಯವಾಗಿಲ್ಲ.
ಒಂದೇ ದಿನ 10584 ಮಂದಿಗೆ ಕೊರೋನಾ ಸೋಂಕು 78ಜನರ ಸಾವು
ಮಹದಾಯಿ ವಿವಾದ: ಜಂಟಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸುಪ್ರೀಂ ಸೂಚನೆ