ಜಗತ್ತಿನಾದ್ಯಂತ 2020ನೇ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಬರಮಾಡಿಕೊಂಡರು.
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಜನರು ಕುಣಿದು ಕುಪ್ಪಳಿಸಿ 2020ನೇ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ ಹಾರ್ಬರ್ ಸೇತುವೆ ಮೇಲೆ ಹೊಸವರ್ಷ ಆಚರಣೆ ಜೋರಾಗಿಯೇ ನಡೆಯಿತು.
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು, ಜಗತ್ತಿಗೆ ನಾವು ಎಷ್ಟು ಆಶಾವಾದಿಗಳು, ಕ್ರಿಯಾತ್ಮಕವಾಗಿದ್ದೇವೆ ಎಂದು ತೋರಿಸಲು ಹೊಸ ವರ್ಷಾಚರಣೆ ಉತ್ತಮ ಮಾರ್ಗ ಎಂದು ಹೇಳಿದ್ದರಿಂದ ಜನರ ಉತ್ಸಹ ಹೆಚ್ಚಿತ್ತು.
ಹಾರ್ಬರ್ ಸೇತುವೆ ಮೇಲಂತೂ ಮನಮೋಹಕ ಸಂಗೀತ, ಬಣ್ಣದೋಕುಳಿಯೊಂದಿಗೆ ಆಸ್ಟ್ರೇಲಿಯನ್ನರು ಹೊಸವರ್ಷವನ್ನು ಸಡಗರದಿಂದ ಸ್ವಾಗತಿಸಿದರು.
ಆಕ್ಲೆಂಡ್ನಲ್ಲಂತೂ ಭರ್ಜರಿ ಪಟಾಕಿಗಳನ್ನು ಸಿಡಿಸಲಾಗಿದೆ. ಇಲ್ಲಿನ ಸ್ಕೈ ಟವರ್ ಬಳಿ ಸಾವಿರಾರು ಜನ ಸೇರಿ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಈ ಟವರ್ ಮೇಲೆ ಇದೇ ಮೊದಲ ಬಾರಿ ಲೇಸರ್ ಮತ್ತು ಅನಿಮೇಶನ್ ಮೂಲಕ ಹೊಸವರ್ಷದ ಚಿತ್ತಾರ ಮೂಡಿಸಲಾಗಿತ್ತು. ನ್ಯೂಜಿಲೆಂಡ್ ಉಳಿದ ನಗರಗಳಲ್ಲೂ ಹೊಸವರ್ಷ ಸಂಭ್ರಮಾಚರಣೆ ಜೋರಾಗಿತ್ತು.
ಜಪಾನ್ನ ಟೋಕಿಯೋದಲ್ಲಿ ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು.
ವಿಶ್ವದೆಲ್ಲೆಡೆ ಸಡಗರದ ಹೊಸ ವರ್ಷಾಚರಣೆ
Follow Us