Thursday, June 17, 2021

ನೈಜೀರಿಯಾ: ಲಾಸ್ಸಾ ವೈರಸ್ ಗೆ 41 ಮಂದಿ ಸಾವು

ನೈಜೀರಿಯಾ: ಜಗತ್ತೇ ಕೊರೊನ ವೈರಸ್ ನಿಂದ ಕಂಗಾಲಾಗಿದ್ದರೆ, ಆಫ್ರಿಕನ್​ ದೇಶ ನೈಜೀರಿಯಾ ಮತ್ತೊಂದು ಮಾರಣಾಂತಿಕ ವೈರಸ್​ ಅಟ್ಟಹಾಸಕ್ಕೆ ನಲುಗಿದೆ.
ಕಳೆದ ಜನವರಿಯಿಂದ ನೈಜೀರಿಯಾದ ಸುಮಾರು 19 ರಾಜ್ಯಗಳಲ್ಲಿ ಲಾಸ್ಸಾ ವೈರಸ್​ ಸೋಂಕು ಹರಡಿದ್ದು, 41 ಜನರನ್ನು ಬಲಿ ಪಡೆದಿದೆ. 258 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ.
ಈ ವೈರಸ್​ ಹೆಚ್ಚಾಗಿ 11 ರಿಂದ 40 ವರ್ಷದವರಲ್ಲಿ ಕಂಡುಬರುತ್ತಿದೆ ಎಂದು ನೈಜೀರಿಯನ್​ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​​ (ನೈಜೀರಿಯನ್​ ರೋಗ ನಿಯಂತ್ರಣಾ ಕೇಂದ್ರ)ನ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ರಕ್ತಸ್ರಾವಯುಕ್ತ ಜ್ವರವಾಗಿದ್ದು ಮೊದಲು ಉತ್ತರ ನೈಜೀರಿಯಾದ ಲಾಸ್ಸಾ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡಿತು. ಅದೇ ಕಾರಣಕ್ಕೆ ಈ ವೈರಸ್​ಗೆ ಲಾಸ್ಸಾ ಎಂದು ಹೆಸರಿಡಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...

ಜುಲೈ 31ರೊಳಗೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ

newsics.com ನವದೆಹಲಿ: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಜುಲೈ 31ರೊಳಗೆ ಪ್ರಕಟವಾಗಲಿದೆ. ಗುರುವಾರ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಈ‌ ಮಾಹಿತಿ ನೀಡಿದೆ. ಇಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ಸಿಬಿಎಸ್ಇಗೆ 10,...
- Advertisement -
error: Content is protected !!