Tuesday, April 13, 2021

ಚಿನ್ನದರಮನೆಯಲ್ಲ, ಚಿನ್ನದ ಹೋಟೆಲ್!

ಹನೋಯಿ: ಈಗಿರೋ ಬಂಗಾರದ ದರದಲ್ಲಿ ಒಂದು ಗ್ರಾಂ ಚಿನ್ನ ಕೊಳ್ಳೋದೇ ಕಷ್ಟ. ಹೀಗಿರುವಾಗ 25 ಅಂತಸ್ತಿನ ಕಟ್ಟಡವನ್ನೇ ಚಿನ್ನದಲ್ಲಿ ನಿರ್ಮಿಸಿದರೆ ಹೇಗಿರುತ್ತೆ…? ಏನು ತಮಾಷೆ ಅಂತಿದ್ದೀರಾ? ಖಂಡಿತಾ ಇಲ್ಲ. ಇಂತಹದೊಂದು ಮನಮೋಹಕ ಸ್ವರ್ಣ ಲೇಪಿತ ರೆಸ್ಟೋರೆಂಟ್ ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ನಿರ್ಮಾಣಗೊಂಡಿದೆ.
ತಿಂಡಿ ತಿನ್ನುವ ಬೌಲ್ ನಿಂದ ಆರಂಭಿಸಿ ಟೀಕಪ್, ಕೈತೊಳೆಯುವ ಬೇಸಿನ್, ಕಮೋಡ್, ಸ್ನಾನ ಮಾಡುವ ಬಾತ್ ಟಬ್ ಹೀಗೆ ಎಲ್ಲವೂ ಇಲ್ಲಿ ಸ್ವರ್ಣಮಯ. 25 ಅಂತಸ್ತಿನ ಈ ರೆಸ್ಟೋರೆಂಟ್ ಕಟ್ಟಡ ಹೊರಭಾಗದಿಂದ ಹಿಡಿದು ಮೇಲ್ಛಾವಣಿ, ಕಂಬದ ಅಂಚು ಕೊನೆಗೆ ರೆಸ್ಟೋರೆಂಟ್ ಹೊರಭಾಗದಲ್ಲಿರುವ ವಿಶಾಲವಾದ ಸ್ವಿಮ್ಮಿಂಗ್ ಪೂಲ್ ಅನ್ನು ಕೂಡ ಚಿನ್ನದ ಲೇಪನದಿಂದಲೇ ಸಿದ್ಧಪಡಿಸಲಾಗಿದೆ.
1500 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಡೋಲ್ಸ್‌ ಹನೋಯಿ ಲೇಕ್ ಹೆಸರಿನ ಈ ರೆಸ್ಟೋರೆಂಟ್ ಈ ಕೊರೋನಾ ಸಂಕಷ್ಟದಲ್ಲೂ ಬಾಗಿಲು ತೆರೆದಿದ್ದು ವಿಯೆಟ್ನಾಂಗೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿಗೆ ವಿಸಿಟ್ ಹಾಕಿ ಈ ಅಪರೂಪದ ಹೊಟೇಲ್ ನಲ್ಲಿ ಕುಳಿತು ಐಷಾರಾಮಿ ಟ್ರಿಟ್ಮೆಂಟ್ ಪಡೆದು ಉಪಾಹಾರ ಸೇವಿಸಿ, ರೂಂನಲ್ಲಿ ವಾಸ್ತವ್ಯ ಹೂಡಿ ಸಂಭ್ರಮಿಸುತ್ತಿದ್ದಾರೆ.
ಇಷ್ಟಕ್ಕೂ ಒಂದ ದಿನ ಈ ರೂಂನಲ್ಲಿ ಉಳಿಯುವುದಕ್ಕೆ ಕೇವಲ 18,750 ರೂಪಾಯಿ ಪೇ ಮಾಡಿದ್ರೆ ಸಾಕು.
24 ಕ್ಯಾರೆಟ್ ಚಿನ್ನದ ಲೇಪನದಿಂದ ಕಂಗೊಳಿಸುವ ಈ ರೆಸ್ಟೋರೆಂಟ್ ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಜೀವನದಲ್ಲಿ ಒಮ್ಮೆಯಾದ್ರೂ ಚಿನ್ನದ ತಟ್ಟೆಯಲ್ಲಿ ಊಟ ಮಾಡಬೇಕು, ಸ್ವರ್ಣಲೇಪಿತ ಬೆಡ್ ಮೇಲೆ ಮಲಗಬೇಕು ಎನ್ನುವ ಆಸೆ ನಿಮಗಿದ್ದರೆ ನೀವೊಮ್ಮೆ ಇಲ್ಲಿಗೆ ಭೇಟಿ ನೀಡಲು ಮರೆಯದಿರಿ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!