ವಾಷಿಂಗ್ಟನ್: ಚೀನಾದಲ್ಲಿ ಪತ್ತೆಯಾದ ನೋವೆಲ್ ಕೊರೋನಾ ವೈರಸ್ ಇದೀಗ ಅಮೆರಿಕಕ್ಕೆ ದಾಳಿಯಿಟ್ಟಿದೆ. ಮೊದಲ ಪ್ರಕರಣ ವಾಷಿಂಗ್ಟನ್ ನಲ್ಲಿ ಪತ್ತೆಯಾಗಿದೆ. ಅಮೆರಿಕ ಮಾತ್ರವಲ್ಲದೇ ಇತರ ನಾಲ್ಕು ರಾಷ್ಟ್ರಗಳಿಗೆ ನೋವೆಲ್ ಕೊರೋನಾ ವೈರಸ್ ಹಬ್ಬಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. . ಮುಖ್ಯವಾಗಿ ಚೀನಾದ ಶೆನ್ ಜೆನ್ ಪ್ರದೇಶದಲ್ಲಿ ವೈರಸ್ ಹೆಚ್ಚಾಗಿದೆ. ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ನ್ಯೂಮೊನೀಯಾ ಮತ್ತು ಕಿಡ್ನಿ ವೈಫಲ್ಯ ಇದರ ಪ್ರಮುಖ ಲಕ್ಷಣವಾಗಿದೆ.