newsics.com
ಬರ್ಲಿನ್ (ಜರ್ಮನಿ): ನಾನೀಗ ಸ್ವತಂತ್ರವಾಗಿ ಉಸಿರಾಡಬಲ್ಲೆ. ನನಗೆ ಈಗ ಕೃತಕ ಉಸಿರಾಟ ವ್ಯವಸ್ಥೆಯ ಅಗತ್ಯವಿಲ್ಲ ಎಂದು ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಹೇಳಿದ್ದಾರೆ.
ವಿಷಪ್ರಾಶನಕ್ಕೊಳಗಾದ ಬಳಿಕ ಮೊದಲ ಬಾರಿಗೆ ನವಾಲ್ನಿ ಕೂಡ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಅವರು, ಸದ್ಯದಲ್ಲೇ ರಷ್ಯಾಗೆ ತೆರಳುವ ಸುಳಿವು ನೀಡಿದ್ದಾರೆ.
ವಿಷಪ್ರಾಶನಕ್ಕೊಳಗಾಗಿ ಜರ್ಮನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲೆಕ್ಸೀ ನವಾಲ್ನಿ ಶೀಘ್ರದಲ್ಲೇ ರಷ್ಯಾಗೆ ಹಿಂದಿರುಗಲಿದ್ದಾರೆ ಎಂದು ಅವರ ವಕ್ತಾರೆ ಕಿರಾ ಯಾರ್ಮಿಶ್ ತಿಳಿಸಿದ್ದಾರೆ. ಆಗಸ್ಟ್ 20ರಂದು ಸೈಬೀರಿಯದಿಂದ ಮಾಸ್ಕೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ದಿಢೀರನೆ ಅಸ್ವಸ್ಥರಾಗಿದ್ದರು. ಅವರ ಮೇಲೆ ನೊವಿಚೊಕ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕ ಪ್ರಯೋಗವಾಗಿರುವುದು ಪ್ರಯೋಗಾಲಯಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಜರ್ಮನಿ ಹೇಳಿದೆ.
ದೋಷಪೂರಿತ ನಕ್ಷೆ ಪ್ರದರ್ಶಿಸಿದ ಪಾಕ್; ಸಭೆ ಬಹಿಷ್ಕರಿಸಿದ ಭಾರತ