ಬೀಜಿಂಗ್: ಭಾರತದ ಗಡಿಯಲ್ಲಿ ಚೀನಾ ಅಣ್ವಸ್ತ್ರ ಸಿಡಿತಲೆಗಳನ್ನು ನಿಯೋಜಿಸಿದೆಯೇ.. ಈ ಪ್ರಶ್ನೆ ಇದೀಗ ಉದ್ಬವಿಸಿದೆ. ಪಾಕಿಸ್ತಾನ ಚೀನಾಕ್ಕೆ ಹಸ್ತಾಂತರಿಸಿರುವ ಅಕಾಸಿ ಚೀನಾ ಪ್ರದೇಶದಲ್ಲಿ ಖಂಡಾಂತರ ಕ್ಷಿಪಣಿಗಳನ್ನು ಚೀನಾ ನಿಯೋಜಿಸಿದೆ ಎಂಬ ವರದಿ ಹರಿದಾಡುತ್ತಿದೆ.
ಖ್ಯಾತ ರಕ್ಷಣಾ ತಜ್ಞ ಬ್ರಹ್ಮ ಚೆಲ್ಲಾನಿ ಕೂಡ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇದು ನಿಜವಾಗಿದ್ದರೆ ಅತ್ಯಂತ ಕಳವಳಕಾರಿ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಊಹಿಸಲು ಅಸಾಧ್ಯವಾದ ಹಾನಿ ಕ್ಷಿಪಣಿ ಪ್ರಯೋಗದಿಂದ ಸಂಭವಿಸುತ್ತದೆ.
ಮೊದಲಿಗೆ ಅಣ್ವಸ್ತ್ರ ಗಳನ್ನು ಬಳಸುವುದಿಲ್ಲ ಎಂಬ ನೀತಿಯನ್ನು ಭಾರತ ಅನುಸರಿಸುತ್ತಿದೆ. ಆದರೆ ದುಷ್ಟ ದೇಶಗಳು ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸಿದರೆ ಪ್ರತಿದಾಳಿ ನಡೆಸುವ ಸ್ಪಷ್ಟ ನೀತಿಯನ್ನು ಭಾರತ ಅನುಸರಿಸುತ್ತಿದೆ