newsics.com
ಜಕಾರ್ತ: ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ.
ಈ ಕುರಿತಂತೆ ಮಂಗಳವಾರ ಅಧಿಕೃತ ಘೋಷಣೆ ಮಾಡಲಾಗಿದ್ದು, ಇಂಡೊನೇಷ್ಯಾ ಜನಪ್ರತಿನಿಧಿಗಳು ನುಸಂತರಾವನ್ನು ನೂತನ ರಾಜಧಾನಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಅನುಮೋದನೆ ನೀಡಿದ್ದಾರೆ. ಇಂಡೋನೇಷ್ಯಾ ಶಾಸಕರು ಜಕಾರ್ತದಿಂದ ಕಾಲಿಮಂಟನ್ಗೆ ಸ್ಥಳಾಂತರವನ್ನು ಅನುಮೋದಿಸಿದ್ದಾರೆ.
ಹವಾಮಾನ ಬದಲಾವಣೆಯ ಮಧ್ಯೆ ಜಕಾರ್ತಾ ಪ್ರವಾಹಕ್ಕೆ ಗುರಿಯಾಗಿ, ಸಮುದ್ರದ ನೀರಿನಲ್ಲಿ ಮುಳುಗಡೆಯಾಗುತ್ತಿದೆ.ಈ ನುಸಂತರಾ ಬೋರ್ನಿಯೊ ದ್ವೀಪದ ಪೂರ್ವದಲ್ಲಿರುವ ಕಾಡು-ಆವೃತ ಪ್ರದೇಶವಾಗಿದ್ದು. ನುಸಂತರಾ ಎಂದರೆ ಇಂಡೋನೇಷಿಯನ್ ಭಾಷೆಯಲ್ಲಿ “ದ್ವೀಪಸಮೂಹ” ಎಂದು ಹೇಳಲಾಗಿದೆ.