ಸೂಡನ್: ಸೂಡನ್ ನ ರಾಜಧಾನಿ ಖಾರ್ಟೊವಮ್ ನ ಉದ್ಯಾನವನದಲ್ಲಿ ಹಸಿವಿನಿಂದ ದುರ್ಬಲವಾಗಿರುವ 5 ಆಫ್ರಿಕಾ ಸಿಂಹಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಿಂಹಗಳಿಗೆ ಹಲವು ವಾರಗಳಲ್ಲಿ ಆಹಾರ ಮತ್ತು ಔಷಧಗಳಿಲ್ಲದೆ ಬಳಲಿವೆ ಎನ್ನಲಾಗಿದೆ.
ಓಸ್ಮನ್ ಸಾಲಿಹ್ ಎಂಬ ಫೇಸ್ ಬುಕ್ ಬಳಕೆದಾರ ಈ ಚಿತ್ರಗಳನ್ನು ಅಪ್ ಲೋಡ್ ಮಾಡಿ ನೆರವು ನೀಡುವಂತೆ ಕೋರಿದ್ದಾರೆ. ಇದರ ಪರಿಣಾಮವಾಗಿ ಹಲವು ಸ್ವಯಂ ಸೇವಕರು ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಅವುಗಳಿಗೆ ಆಹಾರ ಮತ್ತು ಚಿಕಿತ್ಸೆ ನೀಡಲಾಗಿದೆ.