newsics.com
ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅಲ್ಪ ಮತಗಳಿಂದ ಮುನ್ನಡೆ ಪಡೆದಿರುವ ಹಿನ್ನೆಲೆಯಲ್ಲಿ ಜಾರ್ಜಿಯಾ ರಾಜ್ಯದಲ್ಲಿ ಮರು ಮತ ಎಣಿಕೆಗೆ ಆದೇಶಿಸಲಾಗಿದೆ.
ಜಾರ್ಜಿಯಾ ರಾಜ್ಯದ ಕಾರ್ಯದರ್ಶಿ ಬ್ರಾಡ್ ರಫೆನ್ಸ್ ಪರ್ಗೆರ್ ಈ ಮಾಹಿತಿ ನೀಡಿದ್ದಾರೆ. ಜಾರ್ಜಿಯಾದಲ್ಲಿ ಮತ ಮರು ಎಣಿಕೆ ನಡೆಸಲಾಗುವುದು ಎಂದು ಖಚಿತಪಡಿಸಿದ ರಫೆನ್ಸ್ ಪರ್ಗೆರ್, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್’ಗಿಂತ ಕೇವಲ 1,579 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪ ಮಾಡಿದ ನಂತರ ಫಿಲಿಡೆಲ್ಫಿಯಾ ಮತ್ತು ಜಾರ್ಜಿಯಾದಲ್ಲೂ ಜೋ ಬೈಡೆನ್ ಮುನ್ನಡೆಯಲ್ಲಿದ್ದು, ಅಂತಿಮ ಫಲಿತಾಂಶ ಘೋಷಣೆ ವಿಳಂಬವಾಗುವುದು ಖಚಿತವಾಗಿದೆ.