Wednesday, October 5, 2022

ಪುಲ್ವಾಮಾ ಅಷ್ಟೇ ಅಲ್ಲ, ಮುಂಬೈ ಸ್ಪೋಟದಲ್ಲೂ ನಮ್ಮದೇ ಪಾತ್ರ ಎಂದ ಪಾಕ್

Follow Us

newsics.com
ಇಸ್ಲಾಮಾಬಾದ್: ಪುಲ್ವಾಮಾ ದಾಳಿ ಅಷ್ಟೇ ಅಲ್ಲ, ಮುಂಬೈ ಸ್ಪೋಟದಲ್ಲೂ ತನ್ನ ಕೈವಾಡವಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) 26/11 ಮುಂಬೈ ದಾಳಿಯಲ್ಲಿ ತನ್ನ ದೇಶದ ಹನ್ನೊಂದು ಭಯೋತ್ಪಾದಕರ ಉಪಸ್ಥಿತಿಯನ್ನು ದೃಢಪಡಿಸಿದೆ.
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅಲ್ ಫೌಜ್ ದೋಣಿ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್‌ನ ಮುಹಮ್ಮದ್ ಅಮ್ಜದ್ ಖಾನ್ ಅವರನ್ನು 880 ಪುಟಗಳ ಉದ್ದದ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಅಮ್ಜದ್ ಖಾನ್ಯಮಹಾ ಮೋಟೋ ಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ ಗಳು, ಕರಾಚಿಯ ಎಆರ್ ಝಡ್ ವಾಟರ್ ಸ್ಪೋರ್ಟ್ ನಿಂದ ಗಾಳಿ ತುಂಬಬಹುದಾದ ದೋಣಿಗಳನ್ನು ಖರೀದಿಸಿದ, ನಂತರ ಇದನ್ನು ಭಾರತದ ವಾಣಿಜ್ಯ ನಗರಿಯ ಮೇಲಿನ ದಾಳಿಯಲ್ಲಿ ಬಳಸಲಾಯಿತು. ಅಲ್-ಹುಸೇನಿ ದೋಣಿಯ ಕ್ಯಾಪ್ಟನ್ ಆಗಿದ್ದ ಎಂದು ಸಹ ಉಲ್ಲೇಖಿಸಲಾಗಿದೆ.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಯನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪಟ್ಟಿಯಲ್ಲಿ ದೇಶದ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ. ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪುಲ್ವಾಮಾ ದಾಳಿಯ ರೂವಾರಿ ತಾನೆಂದು ಪಾಕ್ ಸಚಿವರು ಸಂಸತ್ತಿನಲ್ಲೇ ಹೇಳಿದ್ದರು.

ಮರ ಬಿದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಾವು

ವಿಶ್ವದ ಟಾಪ್ 2 ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರಿನ ವೈದ್ಯ

ಸ್ಪುಟ್ನಿಕ್ -ವಿ ಲಸಿಕೆ ಶೇ.92ರಷ್ಟು ಯಶಸ್ವಿ- ರಷ್ಯಾ ಸಂಸ್ಥೆ

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!