ಬೀಜಿಂಗ್: ಬಡತನ ನಿರ್ಮೂಲನೆಯಲ್ಲಿ ಚೀನಾ ದಾಖಲೆ ಬರೆದಿದೆ. ಚೀನಾದ ಜಿಂಗಾಸು ಪ್ರಾಂತ್ಯದಲ್ಲಿ ಈ ಸಾಧನೆ ಮಾಡಲಾಗಿದೆ. ಇಲ್ಲಿನ ಒಟ್ಟು ಜನಸಂಖ್ಯೆ 8 ಕೋಟಿ. ಆದರೆ ಬಡವರು ಮಾತ್ರ 17. ಉಳಿದ ಎಲ್ಲರೂ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಬಡವರ ಸಂಖ್ಯೆ ಇಪ್ಪತೈದು ಲಕ್ಷದ ನಲುವತ್ತು ಸಾವಿರವಾಗಿತ್ತು. ಇದು ಮಾದರಿ ಸಾಧನೆ ಎಂದಿದೆ ಚೀನಾ.