ಬೀಜಿಂಗ್,: ಚೀನಾದಲ್ಲಿ 5,974 ಜನರು ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿರುವುದು ದೃಢಪಟ್ಟಿದ್ದು, ಸಾವಿನ ಸಂಖ್ಯೆ 132 ಕ್ಕೆ ಏರಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,459 ಪ್ರಕರಣಗಳು ಮತ್ತು 26 ಮಾರಣಾಂತಿಕ ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳು ಹುವೈ ಪ್ರಾಂತ್ಯದ್ದಾಗಿವೆ. ಚೀನಾದ ವಿಶೇಷ ಆಡಳಿತ ಪ್ರದೇಶಗಳಾದ ಹಾಂಗ್ ಕಾಂಗ್, ಮಕಾವು ಮತ್ತು ತೈವಾನ್ ಗಳಲ್ಲಿ ಸಹ ಕ್ರಮವಾಗಿ ಎಂಟು, ಏಳು ಮತ್ತು ಎಂಟು ವೈರಾಣು ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಚೀನಾದಲ್ಲಿ 5,900 ಮಂದಿಗೆ ಕೊರೋನಾ ಸೋಂಕು, 132 ಸಾವು
Follow Us