NEWSICS.COM
ಅಮೆರಿಕ: ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಭಾರತದ 5,00,000 ಕ್ಕೂ ಹೆಚ್ಚು ಹಾಗೂ ಬೇರೆ ಬೇರೆ ದೇಶಗಳ ಒಟ್ಟು ಸುಮಾರು 11 ಮಿಲಿಯನ್ ದಾಖಲೆ ರಹಿತ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡುವುದಾಗಿ ಭರವಸೆ ನೀಡಿದ್ದಾರೆಂದು ವರದಿಯಾಗಿದೆ. ವಾರ್ಷಿಕ ಕನಿಷ್ಠ 95,000 ಹೆಚ್ಚು ಜನರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಕೆಲಸದ ನಿಮಿತ್ತ ಬಂದು ಅಮೆರಿಕ ದೇಶದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವವರಿಗೆ ನೀಡಲಾಗುವ ವೀಸಾ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಬೈಡನ್ ನೀಡಿದ್ದಾರೆ ಎಂದು ತಿಳಿದುಬಂದಿದೆ.