♦ ಇಂದು ಮೊದಲ ಹಂತದ ಫಲಿತಾಂಶ ಪ್ರಕಟ ಸಾಧ್ಯತೆ
ಲಂಡನ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ನಿಗ್ರಹ ಲಸಿಕೆ ಮನುಷ್ಯರ ಮೇಲಿನ ಪ್ರಯೋಗ ಅಂತಿಮ ಹಂತದಲ್ಲಿದ್ದು, ಗುರುವಾರ (ಜುಲೈ 16) ಮೊದಲ ಹಂತದ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಸ್ಟ್ರಾಜೆನೆಕಾ ಕಂಪನಿಯೊಂದಿಗೆ ಸೇರಿ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಈ ಲಸಿಕೆ ಈಗಾಗಲೇ ಮಾನವರ ಮೇಲಿನ ಪ್ರಯೋಗದ (ಕ್ಲಿನಿಕಲ್ ಟ್ರಯಲ್) ಅಂತಿಮ ಹಂತದಲ್ಲಿದೆ. ಈ ಸಂಶೋಧನೆಯ ಆರಂಭಿಕ ಹಂತದ ಫಲಿತಾಂಶ ಗುರುವಾರ (ಜು.16) ಘೋಷಣೆಯಾಗಬಹುದು ಎಂದು ಹೇಳಲಾಗಿದೆ. ಆಕ್ಸ್ಫರ್ಡ್ ಲಸಿಕೆ ಯಶಸ್ವಿಯಾದರೆ ಅದು ಭಾರತದಲ್ಲಿಯೂ ಉತ್ಪಾದನೆಯಾಗಲಿದೆ.
ಮನೆಗೇ ಬರಲಿದೆ ಕೊರೋನಾ ನಿರೋಧಕ ಕಷಾಯ…!
ಬ್ರೆಜಿಲ್ ನಲ್ಲಿ ಕಳೆದ ತಿಂಗಳಿನಿಂದ ಸಾವಿರಾರು ಜನರ ಮೇಲೆ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಐಟಿವಿ ಸುದ್ದಿ ಸಂಸ್ಥೆಯ ರಾಜಕೀಯ ವಿಶ್ಲೇಷಕ ರಾಬರ್ಟ್ ಪೆಸ್ಟೋನ್ ಮಾಹಿತಿ ನೀಡಿದ್ದಾರೆ. ವೈರಸ್ ನಾಶಪಡಿಸುತ್ತಿರುವ ಅಂಶ (ಟಿ-ಸೆಲ್) ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಅವರು ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಎರಡು ಲಸಿಕೆ ಸೇರಿ ಹತ್ತಕ್ಕೂ ಅಧಿಕ ಕಂಪನಿಗಳು ಕೊರೋನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಇದು ಪೂರ್ಣಗೊಂಡಲ್ಲಿ ಸೆಪ್ಟಂಬರ್ ಹೊತ್ತಿಗೆ ಲಸಿಕೆ ದೊರೆಯಲಿದೆ. ಆದರೆ, ಆಗಸ್ಟ್ ಮಧ್ಯಭಾಗದಲ್ಲಿಯೇ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ಹೇಳಿಕೊಂಡಿದೆ.