Saturday, November 28, 2020

ಪುಲ್ವಾಮಾ ದಾಳಿಗೆ ನಾವೇ ಹೊಣೆ ಎಂದ ಪಾಕ್ ಸಚಿವ!

newsics.com
ಇಸ್ಲಾಮಾಬಾದ್​: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ​ ಸಚಿವ ಫವಾದ್​ ಚೌಧರಿ ಹೇಳಿದ್ದಾರೆ.
ಈ ದಾಳಿಯಲ್ಲಿ ಭಾರತ ಪ್ಯಾರಾಮಿಲಿಟರಿ ಪಡೆಯ 30 ಸೈನಿಕರು ಹುತಾತ್ಮರಾಗಿದ್ದ ಘಟನೆಗೆ ಪಾಕಿಸ್ತಾನವೇ ಕಾರಣ ಎಂದು ಪಾಕ್ ಸಂಸತ್ತಿನಲ್ಲೆ ಹೇಳಿಕೆ ನೀಡಿದ್ದಾರೆ. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಫವಾದ್​ ಚೌಧರಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನಕ್ಕೆ ವೈಮಾನಿಕ ದಾಳಿಯ ಎಚ್ಚರಿಕೆ ನೀಡಿತ್ತಾ ಭಾರತ?

ಈ ದಾಳಿಯಲ್ಲಿ ತಮ್ಮ ಪಾತ್ರವಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ತಮ್ಮ ಪ್ರಾಯೋಜಕತ್ವ ಇತ್ತು ಎಂದು ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ನಾನು ಭಾರತ ನೆಲದಲ್ಲೇ ಹೊಡೆದೆವು. ಪುಲ್ವಾಮಾದಲ್ಲಿನ ನಮ್ಮ ಯಶಸ್ಸು, ಪ್ರಧಾನಿ ಇಮ್ರಾನ್ ಖಾನ್​ ನಾಯಕತ್ವದ ಅಡಿಯಲ್ಲಿರುವ ಜನರ ಯಶಸ್ಸಾಗಿದೆ ಎಂದು ಫವಾದ್​ ಚೌಧರಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ದಾಖಲು

newsics.com ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಶುಕ್ರವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಬೆಂಗಳೂರಿನ ಎಮ್.ಎಸ್....

ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಹತ್ಯೆ

newsics.com ಟೆಹ್ರಾನ್: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.ಟೆಹ್ರಾನ್‌ನ ಸಮೀಪ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್‌ನ...

ಮುಂಬೈನಲ್ಲಿ ದಾರಿ ತಪ್ಪಿದ್ದ ಸಚಿನ್ ತೆಂಡೂಲ್ಕರ್!

newsics.com ಬೆಂಗಳೂರು: ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಮುಂಬೈನಲ್ಲಿ ದಾರಿ ತಪ್ಪಿದ್ದರಂತೆ. ಆಗ ಆಟೋವಾಲಾ ಒಬ್ಬರು ನೆರವಿಗೆ ಬಂದಿದ್ದರಿಂದ ಮನೆ ತಲುಪಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.ಈ ವರ್ಷದ ಜನವರಿಯಲ್ಲಿ...
- Advertisement -
error: Content is protected !!