Monday, March 1, 2021

14 ವರ್ಷದ ಬಾಲಕಿಯನ್ನು ಮದುವೆಯಾದ ಪಾಕ್ ಸಂಸತ್ ಸದಸ್ಯ

newsics.com

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ ಸದಸ್ಯರೊಬ್ಬರು 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾರೆ. ಜಮಿಯಾತ್ ಉಲೇಮಾ ಎ ಇಸ್ಲಾಮ್ ಪಕ್ಷಕ್ಕೆ ಸೇರಿದ ಸಂಸತ್ ಸದಸ್ಯ ಮೌಲಾನಾ ಸಲಾವುದ್ದೀನ್ ಅಯೂಬಿ ಮದುವೆಯಾದ ಸಂಸತ್ ಸದಸ್ಯರಾಗಿದ್ದಾರೆ. ಸಂಸತ್ ಸದಸ್ಯ ಅಯೂಬಿಗೆ 50 ವರ್ಷ ವಯಸ್ಸು.

ಸಲಾವುದ್ದೀನ್ ಅಯೂಬಿ ಬಲೂಚಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ.
ಚಿತ್ರಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜುಗೂರ್ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಸಂಸತ್ ಸದಸ್ಯರು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲಾ ದಾಖಲಾತಿ ಪ್ರಕಾರ ಜನ್ಮದಿನ ಅಕ್ಟೋಬರ್ 28, 2006 ಆಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಜನನ ದಿನಾಂಕದ ಪ್ರಕಾರ ಅವಳಿಗೆ ಇದೀಗ 14 ವರ್ಷ ವಯಸ್ಸು. ಪಾಕಿಸ್ತಾನದ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ಮದುವೆಯಾಗಲು 16 ವರ್ಷ ವಯಸ್ಸು ಕಡ್ಡಾಯವಾಗಿದೆ.
ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದು ದೂರು ದಾಖಲಿಸಿದ ಬಳಿಕ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಮಾನಕ್ಕೆ ಅನುಮತಿ ನೀಡಿದ ಭಾರತ

ಮಾರ್ಚ್ 9ರ ತನಕ ರವಿ ಪೂಜಾರಿ ಮುಂಬೈ ಪೊಲೀಸ್ ವಶಕ್ಕೆ

ಊಟದ ಜತೆ ಮೂತ್ರವೂ ಪಾರ್ಸಲ್!

ಮತ್ತಷ್ಟು ಸುದ್ದಿಗಳು

Latest News

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...

ಶೂಟಿಂಗ್ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರದ ರಿಷಬ್ ಶೆಟ್ಟಿ

newsics.com ಹಾಸನ: ನಟ ರಿಷಬ್ ಶೆಟ್ಟಿ ಚಿತ್ರೀಕರಣದ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಬೇಲೂರು ಬಳಿ ಚಿತ್ರೀರಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಗೆ ಬೆಂಕಿ...
- Advertisement -
error: Content is protected !!