newsics.com
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸುದ್ದಿ ವಾಹಿನಿಯ ಬಿಸಿ ಬಿಸಿ ಚರ್ಚೆಯ ವೇಳೆ ತಾಳ್ಮೆ ಕಳೆದುಕೊಂಡ ಮಹಿಳಾ ನಾಯಕಿಯೊಬ್ಬರು ಸಂಸತ್ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ಈ ಘಟನೆ ನಡೆದಿದೆ. ಪಾಕ್ ಸಂಸತ್ ಸದಸ್ಯ ಖಾದಿರ್ ಖಾನ್ ಗೆ ಮಹಿಳಾ ನಾಯಕಿ ಡಾ. ಪಿರ್ದೋಸ್ ಅಶಿಕ್ ಕಪಾಳ ಮೋಕ್ಷ ಮಾಡಿದ್ದಾರೆ.
ತಮ್ಮ ಕ್ರಮವನ್ನು ಡಾ. ಪಿರ್ದೋಸ್ ಸಮರ್ಥಿಸಿಕೊಂಡಿದ್ದಾರೆ. ಚರ್ಚೆಯ ವೇಳೆ ಖಾದಿರ್ ಖಾನ್ ತನ್ನ ಮತ್ತು ತನ್ನ ತಂದೆಯ ವಿರುದ್ಧ ಅವಾಚ್ಯ ಪದ ಪ್ರಯೋಗ ಬಳಸಿದ್ದಾರೆ. ಇದರಿಂದ ತಾಳ್ಮೆಗೆಟ್ಟು ಕಪಾಳಕ್ಕೆ ಬಾರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.