ಇಸ್ಲಾಮಾಬಾದ್: ಪಾಕಿಸ್ತಾನದ ವಾಯುಪಡೆಗೆ ಸೇರಿದ ಯುದ್ದ ವಿಮಾನ ಪತನಗೊಂಡಿದೆ. ಪಾಕಿಸ್ತಾನದ ಅಟ್ಟೋಕ್ ವಲಯದ ಪಿಂಡಿಗೆಜ್ ಎಂಬಲ್ಲಿ ಈ ದುರಂತ ಸಂಭವಿಸಿದೆ. ಯಾವ ವಿಮಾನ ಅಪಘಾತಕ್ಕೀಡಾಗಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.
ಪೈಲಟ್ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.
ಎಂದಿನಂತೆ ಮುಂಜಾನೆ ಗಸ್ತು ಕರ್ತವ್ಯದಲ್ಲಿ ನಿರತವಾಗಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಏರ್ ಲೈನ್ಸ್ ಕೂಡ ಸುದ್ದಿಯಾಗಿತ್ತು. ಶೇಕಡ 60 ಪೈಲಟ್ ಗಳು ನಕಲಿ ದಾಖಲೆ ಪತ್ರ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು.