Tuesday, April 13, 2021

ಭಾರತದಿಂದ ಔಷಧ ಖರೀದಿ ಪ್ರಸ್ತಾಪ: ಇಮ್ರಾನ್ ಖಾನ್ ಗೆ ಹೊಸ ತಲೆ ನೋವು

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಾರಕ ಕೊರೋನಾ ವೇಗವಾಗಿ ಹಬ್ಬುತ್ತಿದೆ. ಆದರೂ ಪಾಕಿಸ್ತಾನದ ಒಣ ಜಂಭ ಕಡಿಮೆಯಾಗಿಲ್ಲ. ಭಾರತದಿಂದ ಔಷಧ ಖರೀದಿಗೆ ಪಾಕಿಸ್ತಾನ ಹಿಂದೇಟು ಹಾಕುತ್ತಿದೆ.  ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಭಾರತ ಕೊರೋನಾ ತಡೆಗಟ್ಟಲು ನೆರವಾಗುವ ಹೆಚ್ ಸಿ ಕ್ಯೂ ಮಾತ್ರೆಗಳನ್ನು ಪೂರೈಸಿದೆ. ಪಾಕಿಸ್ತಾನ ಮಾತ್ರ ಭಾರತದ ನೆರವನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದೆ.  2019ರಲ್ಲಿ ಪಾಕಿಸ್ತಾನ ಭಾರತದಿಂದ ಔಷಧ ಖರೀದಿ ಮೇಲೆ ನಿಷೇಧ ಹೇರಿತ್ತು. ಬಳಿಕ ಇದರಲ್ಲಿ ಸ್ವಲ್ಪ ಸಡಿಲಿಕೆ ಮಾಡಿತ್ತು. ಜೀವ ರಕ್ಷಕ ಔಷಧಗಳ ಮೇಲಿನ ನಿಷೇಧವನ್ನು ಹಿಂತೆಗೆಯಲಾಗಿತ್ತು.  ಭಾರತದ 450 ಜೀವ ರಕ್ಷಕ ಔಷಧಗಳಿಗೆ ಪಾಕಿಸ್ತಾನದಲ್ಲಿ ಭಾರಿ ಬೇಡಿಕೆಯಿದೆ. ರೋಗಿಗಳ  ಪ್ರಾಣ ರಕ್ಷಿಸಲು ಇದು ಅನಿವಾರ್ಯವಾಗಿದೆ. ಕೊರೋನಾ ತಡೆಗಟ್ಟಲು ಸಾರ್ಕ್ ಸದಸ್ಯ ರಾಷ್ಟ್ರಗಳ ಮಧ್ಯೆ ನಿಕಟ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಕುರಿತ ವಿಡಿಯೋ ಸಂವಾದದಲ್ಲಿ  ಪಾಕ್ ಪ್ರಧಾನಿ ಭಾಗವಹಿಸಿರಲಿಲ್ಲ. ಸಲಹೆಗಾರರೊಬ್ಬರು ಪಾಕ್ ಸರ್ಕಾರವನ್ನು  ಪ್ರತಿನಿಧಿಸಿದ್ದರು. ಪಾಕಿಸ್ತಾನದಲ್ಲಿ ಕೊರೋನಾ 450 ಮಂದಿಯ ಬಲಿ ಪಡೆದಿದ್ದು, 34000 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!