newsics.com
ಇಸ್ಲಾಮಾಬಾದ್: ಪಾಕಿಸ್ತಾನ ವಿಮಾನ ಸಂಸ್ಥೆಯ ಪೈಲಟ್ ಗಳು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ನಕಲಿ ಪ್ರಮಾಣಪತ್ರ ಪಡೆದು ಸುದ್ದಿಯಲ್ಲಿದ್ದ ಈ ಪೈಲಟ್ ಗಳು ಇದೀಗ ಶಿಫ್ಟ್ ಮುಗಿದಿದೆ ಎಂಬ ಕಾರಣ ನೀಡಿ ವಿಮಾನ ಚಲಾಯಿಸಲು ನಿರಾಕರಿಸಿದ್ದಾರೆ.
ರಿಯಾದ್ ನಿಂದ ಪಾಕಿಸ್ತಾನದ ಇಸ್ಲಾಮಾಬಾದ್ ಗೆ ಹೊರಟಿದ್ದ ಪಾಕಿಸ್ತಾನ ಏರ್ ಲೈನ್ಸ್ ವಿಮಾನ , ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ದಮ್ಮಂ ನಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದರು.
ಬಳಿಕ ಮರು ಪ್ರಯಾಣಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಸಮಸ್ಯೆ ಆರಂಭವಾಯಿತು. ವಿಮಾನ ಹಾರಾಟ ನಡೆಸಲು ಪೈಲಟ್ ನಿರಾಕರಿಸಿದ್ದಾನೆ. ನನ್ನ ಶಿಫ್ಟ್ ಅವಧಿ ಮುಗಿದಿದೆ. ಇನ್ನು ಹಾರಾಟ ನಡೆಸಲು ಸಾಧ್ಯ ಇಲ್ಲ ಎಂದು ಫೈಲಟ್ ಪಟ್ಟು ಹಿಡಿದಿದ್ದಾನೆ.
ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಗದ್ದಲ ಎಬ್ಬಿಸಿದರು. ಬಳಿಕ ಅವರಿಗೆ ಹೊಟೇಲ್ ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಲಿಸಲಾಯಿತು. ಬದಲಿ ಪೈಲಟ್ ವ್ಯವಸ್ಥೆ ಮಾಡಿ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕ್ ಏರ್ ಲೈನ್ಸ್ ಪ್ರಯಾಣಿಕರಿಗೆ ಭರವಸೆ ನೀಡಿತ್ತು. ಅಂತಿಮವಾಗಿ ಹೊಸ ಪೈಲಟ್ ವಿಮಾನ ಹಾರಾಟಕ್ಕೆ ಬರಬೇಕಾಯಿತು.