newsics.com
ಲಾಹೋರ್: ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನೆಲೆಯಲ್ಲಿ ಸೋಮವಾರ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್ರನ್ನು ಲಾಹೋರ್ನ ಅಕೌಂಟಬಿಲಿಟಿ ನ್ಯಾಯಾಲಯ ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪ್ರಧಾನಿ ನವಾಝ್ ಶರೀಫ್ರ ಸಹೋದರ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಅಧ್ಯಕ್ಷರೂ ಆಗಿರುವ ಶಹಬಾಝ್ರನ್ನು ಆದಾಯ ಮೀರಿದ ಆಸ್ತಿ ಹೊಂದಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಗಳಲ್ಲಿ ಬಂಧಿಸಲಾಗಿತ್ತು.
700 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದ ಬಳಿಕ, ನ್ಯಾಯಾಲಯದ ಆವರಣದಲ್ಲೇ ಅವರನ್ನು ಬಂಧಿಸಲಾಗಿತ್ತು.
ಅಕ್ರಮ ಹಣ ವರ್ಗಾವಣೆ; ಪಾಕ್ ಪ್ರತಿಪಕ್ಷ ನಾಯಕನ ಬಂಧನ
ಕೊರೋನಾಗೆ ಹತ್ತು ಲಕ್ಷ ಜನ ಬಲಿ; ವಿಶ್ವಸಂಸ್ಥೆ ಬೇಸರ