newsics.com
ಇಸ್ಲಾಮಾಬಾದ್(ಪಾಕಿಸ್ತಾನ): ಭಾರತದ ಜತೆ ಧಾರ್ಮಿಕ ಪ್ರವಾಸೋದ್ಯಮ ಆರಂಭಿಸುವ ಕುರಿತು ಪ್ರಧಾನಿ ಇಮ್ರಾನ್ ಖಾನ್ ಆಡಳಿತ ಪಕ್ಷದ ಪ್ರಮುಖ ಹಿಂದೂ ಸಂಸದರೊಬ್ಬರು ಮಂಗಳವಾರ ಪ್ರಸ್ತಾವ ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆಯನ್ಜು ಪಾಕಿಸ್ತಾನ ವಿದೇಶಾಂಗ ಕಚೇರಿಯೂ ಬೆಂಬಲಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆ ಭಾರತ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ ಎನ್ನಲಾಗಿದೆ. ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಶೇಷ ವಿಮಾನದ ಮೂಲಕ ಪಾಕ್ ಯಾತ್ರಾರ್ಥಿಗಳ ನಿಯೋಗವೊಂದು ಜನವರಿ 29ರಂದು ಭಾರತಕ್ಕೆ ಹೊರಡಲಿದೆ. ತಾವು ಇದರ ನೇತೃತ್ವ ವಹಿಸುವುದಾಗಿ ಪಾಕಿಸ್ತಾನ ಹಿಂದೂ ಪರಿಷತ್ತಿನ ಮುಖ್ಯಸ್ಥ ಮತ್ತು ರಾಷ್ಟ್ರ ಸಂಸತ್ತಿನ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ ಹೇಳಿದ್ದಾರೆ.
ಈ ನಿಯೋಗ ಮೂರು ದಿನ ಭಾರತದಲ್ಲಿರಲಿದೆ. ಈ ವೇಳೆ ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾ, ಅಜ್ಮೀರ್ನ ಖವಾಜ್ ಘರೀಬ್ ನವಾಜ್ ದರ್ಗಾ ಮತ್ತು ಆಗ್ರಾದ ತಾಜ್ಮಹಲ್ಗೆ ಭೇಟಿ ನೀಡಲು ಯೋಜಿಸಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 41,400 ಮಂದಿಗೆ ಕೊರೋನಾ, 53,093 ಜನ ಗುಣಮುಖ, 52 ಸೋಂಕಿತರು ಸಾವು