ಪ್ಯಾರಿಸ್: ಹಿರಿಯ ಪಸ್ತೂನ್ ನಾಯಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಮನ್ಸೂರ್ ಪಸ್ತೀನ್ ಅವರ ಅಪಹರಣ ಖಂಡಿಸಿ, ಪ್ಯಾರಿಸ್ ನಲ್ಲಿರುವ ಪಾಕ್ ರಾಯಭಾರಿ ಕಚೇರಿ ಎದುರು ಪಸ್ತೂನ್ ಸಮದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಪಾಕ್ ಸರ್ಕಾರ , ಮನ್ಸೂರ್ ಪಸ್ತೀನ್ ಅವರ ಅಪಹರಣ ಮಾಡಿದೆ ಎಂದು ಅವರು ಆರೋಪಿಸಿದರು. ತಕ್ಷಣ ಪಸ್ತೀನ್ ಅವರನ್ನು ಸುರಕ್ಷಿತವಾಗಿ ಬಿಡುಗ಼ಡೆ ಮಾಡಬೇಕು ಎಂದು ಆಗ್ರಹಿಸಿದರು