newsics.com
ದುಬೈ: ರಸ್ತೆ ಬದಿಯಲ್ಲಿ 50 ನವಿಲುಗಳು ತಿರುಗಾಡುತ್ತಿದ್ದ ವಿಡಿಯೋವನ್ನು ನಟಿ ಮಿನಿ ಮಾಥುರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ದೂರದರ್ಶನ ನಿರೂಪಕಿ, ನಟಿ ಮತ್ತು ರೂಪದರ್ಶಿಯಾಗಿರುವ ಮಿನಿ ಮಾಥುರ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಾಕಿದ್ದು, ನಾನು ಯಾವತ್ತು ನೋಡದ ವೈಭವವನ್ನು ಇಂದು ನೋಡಿದೆ. ಇದನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇನೆ. ಇದನ್ನು ನೋಡಿ ನನಗೆ ತುಂಬಾನೆ ಸಂತೋಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಪಿಂಕ್ ಮತ್ತು ವಿಲೋ ಸೇಜ್ ಹಾರ್ಟ್ ಅವರ ಕವರ್ ಮಿ ಇನ್ ಸನ್ಶೈನ್ ಎನ್ನುವ ಹಿನ್ನೆಲೆ ಸ್ಕೋರ್ಗೆ ಈ ವಿಡಿಯೋವನ್ನು ಸೇರಿಸಲಾಗಿದೆ.
https://www.instagram.com/reel/CZBxF39JluE/?utm_source=ig_web_copy_link