NEWSICS.COM
ಅಮೆರಿಕ: ಅಮೆರಿಕದ ಔಷಧೀಯ ಸಂಸ್ಥೆ ಫಿಜರ್ ಇಂಕ್ ಮತ್ತು ಜರ್ಮನ್ ಬಯೋಟೆಕ್ ಎಸ್ಇ ಸೋಮವಾರ (ನ.9) ತಮ್ಮ ಕೋವಿಡ್ -19 ಲಸಿಕೆ ಸೋಂಕು ತಡೆಗಟ್ಟುವಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಆರಂಭಿಕ ಮಾಹಿತಿಯು ತೋರಿಸಿದೆ ಎಂದು ಹೇಳಿದ್ದಾರೆ.
3ನೇ ಹಂತದ ಪರೀಕ್ಷೆ ನಡೆಸಿರುವ ಸಂಸ್ಥೆ ಲಸಿಕೆಯ ಖಚಿತತೆಯ ಬಗ್ಗೆ ತಿಳಿಸಿದೆ.
ಫಿಜರ್ ಮತ್ತು ಜರ್ಮನ್ ಮತ್ತು ಬಯೋಟೆಕ್ ಎಸ್ಇ ಕಂಪನಿಗಳು ಲಸಿಕೆಯ ದೊಡ್ಡ-ಪ್ರಮಾಣದ ಕ್ಲಿನಿಕಲ್ ಪ್ರಯೋಗದ ಯಶಸ್ವಿ ಡೇಟಾವನ್ನು ತೋರಿಸಿದ ಮೊದಲ ಘಟಕವಾಗಿದೆ.
ಜಗತ್ತಿಗೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ ಲಸಿಕೆ ಅಭಿವೃದ್ಧಿ ಕೆಲಸದಲ್ಲಿ ನಾವು ನಿರ್ಣಾಯಕ ಹಂತ ತಲುಪುತ್ತಿದ್ದೇವೆ ಎಂದು ಫಿಜರ್ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.