newsics.com
ವಾಷಿಂಗ್ಟನ್: ಕಾನೂನಿನಡಿಯಲ್ಲಿ ನಿಷೇಧಿಸಲಾಗಿದ್ದರೂ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಹುಟ್ಟಲಿರುವ ಮಗುವಿನ ಲಿಂಗವನ್ನು ಪತ್ತೆ ಹಚ್ಚುವ ಕಾನೂನು ಬಾಹಿರ ಕೃತ್ಯ ಮುಂದುವರಿದಿದೆ.
ಅಮೆರಿಕದಲ್ಲಿ ಇದೀಗ ಭ್ರೂಣದ ಲಿಂಗ ಪತ್ತೆ ಹಚ್ಚಿದ ಬಳಿಕ ಪಾರ್ಟಿ ಮಾಡಲಾಗುತ್ತಿದೆ ಈ ಪಾರ್ಟಿಯಲ್ಲಿ ಪಾರಿವಾಳಕ್ಕೆ ಹೆಣ್ಣು ಮತ್ತು ಗಂಡು ಮಗುವಿನ ಸಂಕೇತ ಬಿಂಬಿಸುವ ಬಣ್ಣ ಹಚ್ಚಿ ಬಿಡಲಾಗುತ್ತಿದೆ.
ಇದೇ ರೀತಿ ಪಾರ್ಟಿಯೊಂದರಲ್ಲಿ ಸಿಕ್ಕಿ ನಲುಗಿದ ಪಾರಿವಾಳವನ್ನು ಅಮೆರಿಕದಲ್ಲಿ ರಕ್ಷಿಸಲಾಗಿದೆ. ವೈಲ್ಡ್ ಬರ್ಡ್ಸ್ ಎಂಬ ಎನ್ ಜಿ ಒ ಇದಕ್ಕೆ ಕೈ ಜೋಡಿಸಿದೆ.
ಪಾರಿವಾಳದ ರೆಕ್ಕೆಗಳ ಮೇಲೆ ಪಿಂಕ್ ಬಣ್ಣ ಬಳೆಯಲಾಗಿದೆ. ಪಾರಿವಾಳವನ್ನು ರಕ್ಷಿಸಲಾಗಿದ್ದು ಅದು ಮೊದಲಿನ ಬಣ್ಣಕ್ಕೆ ಮರಳಲು ಹಲವು ದಿನ ಬೇಕಾಗಲಿದೆ ಎಂದು ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ತಿಳಿಸಿದ್ದಾರೆ.