newsucs.com
ಲಂಡನ್; ಇತ್ತೀಚಿನ ಕೆಲ ವರ್ಷಗಳಲ್ಲಿ ಪೋಲಿಯೋ ಕಾಯಿಲೆಗೆ ಒಳಗಾಗಿರುವವರು ಸಂಖ್ಯೆ ತೀರಾ ಕ್ಷೀಣಿಸಿತ್ತು. ಆದರೆ ಲಂಡನ್ನಲ್ಲಿ ಒಳ ಚರಂಡಿ ತಪಾಸಣೆ ವೇಳೆ ಪೋಲಿಯೋ ವೈರಸ್ನ ಕುರುಹು ಪತ್ತೆಯಾಗಿದೆ. ಹೀಗಾಗಿ ವೈರಸ್ ಪತ್ತೆಯಾಗಿರುವುದನ್ನು ರಾಷ್ಟ್ರೀಯ ಘಟನೆ ಎಂದು ಘೋಷಣೆ ಮಾಡಲಾಗಿದೆ.
ಫೆಬ್ರವರಿ ಮತ್ತು ಮೇ ನಡುವಿನ ಒಳಚರಂಡಿ ತಪಾಸಣೆ ವೇಳೆ ಪೋಲಿಯೋವೈರಸ್ ಮಾದರಿ ಕಂಡುಬಂದಿದ್ದು ಅದನ್ನು ಟೈಪ್ 2 (VDPV2) ಪೊಲಿಯೋ ವೈರಸ್ ಎಂದು ವರ್ಗೀಕರಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋ ವೈರಸ್ ಮಾನವನಲ್ಲಿ ಪತ್ತೆಯಾಗಿಲ್ಲ. ಭಯ ಬೇಡ ಆದರೆ ಮಕ್ಕಳು ಹಾಗೂ ಸಾರ್ವಜನಿಕರು ಜಾಗೃತೆಯಿಂದ ಇರುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದೆ.