newsics.com
ಲಾಹೋರ್: ಸುದ್ದಿ ವಾಹಿನಿಯ ಚರ್ಚೆಯ ನೇರಪ್ರಸಾರದ ವೇಳೆ ಎರಡೂ ಪಕ್ಷದ ನಾಯಕರು ಕಪಾಳಮೋಕ್ಷ ಮಾಡಿಕೊಂಡು, ಒಬ್ಬರನ್ನೊಬ್ಬರು ಎಳೆದಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನಿ ಸುದ್ದಿವಾಹಿನಿಯಲ್ಲಿ ಚರ್ಚೆ ನಡೆಸುತ್ತಿದ್ದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್-ಎನ್) ಪ್ರತಿನಿಧಿಸುವ ಅಫ್ನಾನ್ ಉಲ್ಲಾ ಖಾನ್ ಹಾಗೂ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ)ನ ಮುಖಂಡ ಶೇರ್ ಅಫ್ಜಲ್ ಖಾನ್ ಮರ್ವಾತ್ ನಡುವೆ ವಾಗ್ವಾದ ನಡೆಯಿತು.
ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿದ್ದಾರೆ. ಅಫ್ನಾನ್ ಉಲ್ಲಾ ಅವರು ಪಾಕಿಸ್ತಾನ ಮಾಜಿ ಪ್ರಧಾನಿ ಅವರನ್ನು ನಿಂದಿಸಿದ್ದರು, ಮಾರ್ವತ್ ಅವರು ಅಫ್ನಾನ್ ಉಲ್ಲಾ ಖಾನ್ಗೆ ಕಪಾಳಮೋಕ್ಷ ಮಾಡಿದ್ದಾರೆ.
ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ನಾಯಕರನ್ನು ಗೇಲಿ ಮಾಡುತ್ತಿದ್ದಾರೆ.