newsics.com
ಲಂಡನ್: ಶ್ವಾನಗಳು ಅತ್ಯಂತ ನಂಬಿಕಸ್ಥ ಪ್ರಾಣಿ. ಮಾಲಿಕನ ಪ್ರಾಣ ರಕ್ಷಿಸಲು ಕೂಡ ಹಿಂಜರಿಯುವುದಿಲ್ಲ. ಸಾಮಾನ್ಯವಾಗಿ ನಾಯಿ 12ರಿಂದ 14 ವರ್ಷ ಬದುಕುತ್ತವೆ. ಕೆಲವೊಮ್ಮೆ 20 ವರ್ಷ. ಅದಕ್ಕಿಂತ ಜಾಸ್ತಿ ಬದುಕುವ ಸಾಧ್ಯತೆ ಕಡಿಮೆ.
ಇದೀಗ ಪೋರ್ಚುಗಲ್ ನಲ್ಲಿರುವ ಬಾಬಿ ಎಂಬ ಹೆಸರಿನ ಶ್ವಾನ ಈ ಎಲ್ಲ ದಾಖಲೆ ಮುರಿದಿದೆ. ಫೆಬ್ರವರಿ 2ರಂದು ಈ ಶ್ವಾನ 30 ವರ್ಷ 267 ದಿನ ಪೂರ್ಣಗೊಳಿಸಿದೆ. ಇದೀಗ ಶ್ವಾನ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.
ಪೋರ್ಚುಗಲ್ ನಲ್ಲಿರುವ ಕೋಸ್ಟಾ ಕುಟುಂಬದ ಬಳಿ ಈ ಶ್ವಾನ ಇದೆ. ಲಿಯೋನಲ್ ಕೋಸ್ಟಾ ಈ ನಾಯಿಯ ಒಡೆಯ. ಬಾಬಿ ಎಂದರೆ ಅವರಿಗೆ ಅಚ್ಚು ಮೆಚ್ಚು. ಮನೆಯಲ್ಲಿರುವ ನಾಲ್ಕು ಬೆಕ್ಕುಗಳ ಜತೆ ಬಾಬಿ ಆಟವಾಡುತ್ತಾನೆ ಎಂದು ಅವರು ಹೇಳಿದ್ದಾರೆ.