newsics.com
ಯೂರೋಪ್: ಇತ್ತೀಚೆಗಷ್ಟೇ ಆಲೂಗಡ್ಡೆಯಾಕಾರದ ಗ್ರಹವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಸುಮಾರು 1,500 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಈ ಆಲೂಗಡ್ಡೆಯಾಕಾರದಲ್ಲಿದೆ. ಈವರೆಗೆ ಪತ್ತೆಯಾದ ಎಲ್ಲಾ ಗ್ರಹಗಳು ಗೋಳಾಕಾರವಾಗಿದ್ದು, ಈ ಗ್ರಹ ಮಾತ್ರ ಆಕಾರದಲ್ಲಿ ಭಿನ್ನವಾಗಿದೆ.
ಈ ಗ್ರಹಕ್ಕೆ ಡಬ್ಲ್ಯೂಎಎಸ್ಪಿ-103ಬಿ ಎಂದು ನಾಮಕರಣ ಮಾಡಲಾಗಿದೆ. ಯಾವುದೋ ನಕ್ಷತ್ರದಿಂದ ಒತ್ತಡಕ್ಕೆ ಗುರಿಯಾಗಿ ಇದರ ಆಕೃತಿ ಭಿನ್ನವಾಗಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.