newsics.com
ಬೀಜಿಂಗ್: ಚೀನಾದಲ್ಲಿ ಮಾರಕ ಕೊರೋನಾ ಮತ್ತೊಮ್ಮೆ ಸ್ಫೋಟಗೊಂಡಿರುವ ಕಾರಣ ಅಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಶಾಂಘೈ ಸೇರಿದಂತೆ ಚೀನಾದ ಹಲವು ನಗರಗಳಲ್ಲಿ ಲಾಕ್ ಡೌನ್ ಹೇರಲಾಗಿದೆ.
ಇದರಿಂದಾಗಿ ಜನರ ಸಹನೆಯ ಕಟ್ಟೆಯೊಡೆದಿದೆ. ಪ್ರತಿಭಟನೆ ಆರಂಭವಾಗಿದೆ. ಶಾಂಘೈಯಲ್ಲಿ ಲಾಕ್ ಡೌನ್ ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನೆ ಆರಂಭಿಸಿದ್ದಾರೆ.
ಚೀನಾದಲ್ಲಿ ಶೂನ್ಯ ಕೊರೋನಾ ನೀತಿ ಜಾರಿಯಲ್ಲಿ ಇದೆ. ಒಂದು ಪ್ರಕರಣ ವರದಿಯಾದರೂ ಕೂಡ ಇಡೀ ಪ್ರದೇಶವನ್ನು ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ಮನೆಯಿಂದ ಹೊರಗಡೆ ಹೋಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ