ಟೆಹರಾನ್: ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ತನ್ನಿಂದಾದ ಪ್ರಮಾದ ಎಂದು ಇರಾನ್ ತಪ್ಪೊಪ್ಪಿಕೊಂಡ ಬಳಿಕ ಪ್ರತಿಭಟನೆ ಆರಂಭವಾಗಿದೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಶನಿವಾರ ಇರಾನ್ ತನ್ನ ಕೃತ್ಯವನ್ನು ಒಪ್ಪಿಕೊಂಡಿತ್ತು. ಮಾನವ ತಪ್ಪಿನಿಂದ ಈ ದುರಂತ ಸಂಭವಿಸಿದೆ. ಇದು ಉದ್ದೇಶಪೂರ್ವಕವಲ್ಲದ ಕೃತ್ಯ ಎಂದು ಹೇಳಿತ್ತು.ಇದೀಗ ಇರಾನ್ ಕೃತ್ಯದ ವಿರುದ್ದ ಟೆಹರಾನ್ ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ಬಲಿಪಶುಗಳಿಗೆ ಇರಾನ್ ಸೂಕ್ತ ಪರಿಹಾರ ನೀಡಬೇಕೇಂಬ ಕೂಗು ಕೂಡ ತೀವ್ರವಾಗಿದೆ