Monday, November 29, 2021

ಕ್ವಾರಂಟೈನ್ ವಿರುದ್ಧ ಅಮೆರಿಕದ ಹಲವೆಡೆ ಪ್ರತಿಭಟನೆ

Follow Us

ಕಂಕಾರ್ಡ್(ಅಮೆರಿಕ): ಕ್ವಾರಂಟೈನ್ ವಿರುದ್ಧ ಅಮೆರಿಕದ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರತಿಭಟನೆಗಳಿಗೆ ನೈತಿಕ ಬೆಂಬಲವಾಗಿದ್ದಾರೆನ್ನುವುದು ವಿಶೇಷ.
ಕೋವಿಡ್-19 ಪ್ರಕರಣ ಕಡಿಮೆಯಿರುವ ನ್ಯೂಹ್ಯಾಂಪ್​ಷೈರ್​ನಂಥ ರಾಜ್ಯಗಳಲ್ಲಿ ವಿಸ್ತರಿತ ಕ್ವಾರಂಟೈನ್ ಅಗತ್ಯವಿಲ್ಲ ಎಂಬುದು ಪ್ರತಿಭಟನೆಕಾರರ ಪ್ರತಿಪಾದನೆಯಾಗಿದೆ. ಸುಮಾರು 400 ಜನರು ನ್ಯೂ ಹ್ಯಾಂಪ್​ಷೈರ್​ನ ಕಂಕಾರ್ಡ್​ನಲ್ಲಿ ಮಳೆಯಲ್ಲೇ ನಿಂತು ಹಾಗೂ ಕೆಲವರು ಕಾರುಗಳಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಬೇಕೆನ್ನುವುದು ತಮ್ಮ ಅಭಿಮತ ಎಂದು ಅಧ್ಯಕ್ಷ ಟ್ರಂಪ್ ಮಾಡಿರುವ ಟ್ವೀಟ್, ಅವರ ಡೆಮಾಕ್ರಟಿಕ್ ಪಕ್ಷ ಆಡಳಿತದಲ್ಲಿರುವ ಹಲವು ರಾಜ್ಯಗಳಲ್ಲಿ ಪ್ರತಿಭಟನಾಕಾರರಿಗೆ ಪ್ರೇರಣೆಯಾಗಿದೆ. ರಿಪಬ್ಲಿಕನ್ ಪಕ್ಷ ಆಡಳಿತದಲ್ಲಿರುವ ಹ್ಯಾಂಪ್​ಷೈರ್ ಮತ್ತು ಟೆಕ್ಸಾಸ್​ನಲ್ಲಿ ಕೂಡ ಪ್ರತಿಭಟನೆಗಳು ನಡೆದಿವೆ. ಟೆಕ್ಸಾಸ್​ನ ಆಸ್ಟಿನ್​ನಲ್ಲಿ 250ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!