newsics.com
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸದ್ದಿಲ್ಲದೆ ಹೊಸ ಸೇನಾ ಮುಖ್ಯಸ್ಥರ ನೇಮಕಾತಿ ಮಾಡಲಾಗಿದೆ. ಭಾರತದ ವಿರುದ್ಧ ಹುಟ್ಟಿನಿಂದಲೇ ಕಿಡಿ ಕಾರುತ್ತಿರುವ ಲೆಫ್ಟಿನೆಂಟ್ ಜನರಲ್ ಅಸೀಂ ಮುನೀರ್ ನೂತನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಹಾಲಿ ಸೇನಾ ಮುಖ್ಯಸ್ಥರಾಗಿರುವ ಬಾಜ್ವ ನವೆಂಬರ್ 29ರಂದು ನಿವೃತ್ತಿಹೊಂದಲಿದ್ದಾರೆ.
2019ರಲ್ಲಿ ಪುಲ್ವಾಮಾದಲ್ಲಿ ನಡೆದ ದಾಳಿಯ ಸೂತ್ರಧಾರ ಇದೇ ಅಸೀಂ ಮುನೀರ್ ಆಗಿದ್ದ. ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ ಮುನೀರ್ ನೇಮಕದಿಂದಾಗಿ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.