newsics.com
ರಷ್ಯಾ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸರ್ಕಾರದ ಟೆಲಿವಿಷನ್ ಸಭೆಯೊಂದರಲ್ಲಿ ಪದೇ ಪದೇ ಕೆಮ್ಮಿದ್ದಾರೆ.
ಬಳಿಕ ಸ್ಪಷ್ಟನೆ ನೀಡಿದ ಅವರು, ನನಗೆ ಶೀತವಾಗಿದ್ದು, ಕೊರೋನಾದಿಂದ ಬಳಲುತ್ತಿಲ್ಲ ಎಂದು ಹೇಳಿದ್ದಾರೆ. “ಚಿಂತಿಸಬೇಡಿ, ಎಲ್ಲವೂ ಚೆನ್ನಾಗಿದೆ. ಪ್ರತಿದಿನ ಕೋವಿಡ್ -19 ಮಾತ್ರವಲ್ಲದೆ ಇತರ ಎಲ್ಲ ಸೋಂಕುಗಳ ಪರೀಕ್ಷೆಗೂ ಒಳಗಾಗುತ್ತೇನೆ” ಎಂದು ಅವರು ಹೇಳಿದರು.
ಕಳದ ತಿಂಗಳು ಪುಟಿನ್ ಆಪ್ತರಿಗೆ ಕೊರೋನಾ ದೃಢಪಟ್ಟ ಕಾರಣ ಅವರು ಕ್ವಾರಂಟೈನ್ ನಲ್ಲಿದ್ದರು.