Wednesday, November 30, 2022

ಬ್ರಿಟನ್​ ರಾಣಿಯ ಸಾವಿನ ನಿಖರ ಕಾರಣ ಬಯಲು!

Follow Us

newsics.com

ಬ್ರಿಟನ್:  ಬ್ರಿಟನ್​ ರಾಣಿ ಎರಡನೇ ಎಲಿಜಬೆತ್​​​ ಸೆಪ್ಟೆಂಬರ್​ 8ರಂದು ನಿಧನರಾಗಿದ್ದರು. ಇದೀಗ  ಎಲಿಜಬೆತ್​​ರ ಮರಣ ಪ್ರಮಾಣ ಪತ್ರ ಬಿಡುಗಡೆಯಾಗಿದ್ದು, ರಾಣಿ ಎಲೆಜಬೆತ್​ ವೃದ್ಧಾಪ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕಾರಣ ನೀಡಲಾಗಿದೆ.

ಸ್ಕಾಟ್ಲೆಂಡ್​ನ ನ್ಯಾಷನಲ್​ ರೆಕಾರ್ಡ್ಸ್​ ಬಿಡುಗಡೆ ಮಾಡಿದ ಪ್ರಮಾಣ ಪತ್ರದಲ್ಲಿ ಸೆಪ್ಟೆಂಬರ್​ 16ರಂದು ರಾಣಿಯ ಏಕೈಕ ಪುತ್ರಿ ರಾಜಕುಮಾರಿ ಅನ್ನಿ ಎರಡನೇ ಎಲೆಜಬೆತ್​​ರ ಮರಣವನ್ನು ನೋಂದಾಯಿಸಿದ್ದಾರೆ.

ಸೆಪ್ಟೆಂಬರ್​ 13ರಂದು ಬಕಿಂಗ್​​ಹ್ಯಾಮ್​ ಅರಮನೆ ಹೊರಡಿಸಿ ಹೇಳಿಕೆಯಲ್ಲಿ ಅನ್ನಿ ತಾವು ತಮ್ಮ ತಾಯಿಯ ಜೀವನದ ಕೊನೆಯ 24 ಗಂಟೆಗಳ ಕ್ಷಣದಲ್ಲಿ ತಾವು ಅವರೊಂದಿಗೆ ಇದ್ದೆ. ಮರಣ ಪ್ರಮಾಣ ಪತ್ರದಲ್ಲಿ ರಾಣಿ ಎರಡನೇ ಎಲಿಜಬೆತ್​ರ ಮರಣದ ಸ್ಥಳವನ್ನು ಬಾಲ್ಮೋರಲ್​​ ಕ್ಯಾಸಲ್​ ಎಂದು ಹೇಳಿದೆ.

ಮರಣ ಪ್ರಮಾಣ ಪತ್ರದಲ್ಲಿ ಉದ್ಯೋಗ ಎಂದು ಬರೆಯಲಾದ ವಿಭಾಗದಲ್ಲಿ ಹರ್​ ಮೆಜೆಸ್ಟಿ ದಿ ಕ್ವೀನ್​ ಎಂದು ನಮೂದಿಸಲಾಗಿದೆ. ರಾಣಿಯು ಇಂಗ್ಲೆಂಡ್‌ನಲ್ಲಿ ಮರಣಹೊಂದಿದ್ದರೆ, ಆಕೆಯ ಮರಣವನ್ನು ನೋಂದಾಯಿಸುವ ಅಗತ್ಯವಿಲ್ಲ, ಏಕೆಂದರೆ ಕಾನೂನು ಸಾರ್ವಭೌಮ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.  1836 ರ ಹಿಂದಿನ ಶಾಸನವು ಸ್ಕಾಟ್ಲೆಂಡ್‌ನಲ್ಲಿ ಅನ್ವಯಿಸುವುದಿಲ್ಲ, ಇದು ಇಂಗ್ಲೆಂಡ್ ಮತ್ತು ವೇಲ್ಸ್‌ಗೆ ಪ್ರತ್ಯೇಕ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಮತ್ತು “ಪ್ರತಿಯೊಬ್ಬ ವ್ಯಕ್ತಿಯ ಸಾವು” ಅನ್ನು ನೋಂದಾಯಿಸಬೇಕು ಎಂದು ಷರತ್ತು ವಿಧಿಸುತ್ತದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆ: ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!