ನ್ಯೂಯಾರ್ಕ್: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರುವ ವೇಳೆಯಲ್ಲೇ ಅಮೆರಿಕದಲ್ಲಿಯೂ ರಾಮನಾಮ ಸ್ಮರಣೆ ಜೋರಾಗಿಯೇ ಆಗುತ್ತಿದೆ.
ಅಮೆರಿಕದ ಕಾಲಮಾನದ ಪ್ರಕಾರ ಆ.5 ರಂದು ಬೆಳಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈ ಶ್ರೀರಾಮ್ ಎಂಬ ಪದದ ಚಿತ್ರಗಳು ಹಾಗೂ ರಾಮನ 3ಡಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಮಮಂದಿರದ ವಿನ್ಯಾಸವನ್ನು ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್’ನ ಬಿಲ್ ಬೋರ್ಡ್’ನಲ್ಲಿ ಪ್ರದರ್ಶಿಸಲಾಗುತ್ತಿದೆ. ವಿಶ್ವದ ಅತಿ ಐಕಾನಿಕ್ ಸ್ಕ್ರೀನ್’ನಲ್ಲಿ ಪ್ರಭು ಶ್ರೀರಾಮ, ತ್ರಿವರ್ಣ ಧ್ವಜ ಪ್ರದರ್ಶನಗೊಳ್ಳುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನದಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾರಿತು.
#WATCH USA: A digital billboard of #RamMandir comes up in New York’s Times Square.
— ANI (@ANI) August 5, 2020
Prime Minister Narendra Modi performed 'Bhoomi Pujan' of #RamMandir in Ayodhya, Uttar Pradesh earlier today. pic.twitter.com/Gq4Gi2kfvR