newsics.com
ಸ್ವೀಡನ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಿಜರ್ ಲ್ಯಾಂಡ್ ನ ಮಹಿಳಾ ನ್ಯಾಯಾಧೀಶರೊಬ್ಬರು ನೀಡಿದ ತೀರ್ಪಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಕೇವಲ 11 ನಿಮಿಷಗಳ ಕಾಲ ಮಾತ್ರ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳಾ ನ್ಯಾಯಾಧೀಶರೊಬ್ಬರು ಅಭಿಪ್ರಾಯಪಟ್ಟಿದ್ದಲ್ಲದೆ ಆರೋಪಿಯ ಶಿಕ್ಷೆಯ ಪ್ರಮಾಣವನ್ನು 4 ವರ್ಷ ಮೂರು ತಿಂಗಳ ಬದಲಾಗಿ ಮೂರು ವರ್ಷಕ್ಕೆ ಇಳಿಸಿದ್ದರು.
ನ್ಯಾಯಾಧೀಶರ ಈ ತೀರ್ಪಿಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.
11 ನಿಮಿಷ ಕೂಡ ದೊಡ್ಡ ಅವಧಿ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ನಾಗರಿಕರು ಪ್ರತಿಭಟನೆ ನಡೆಸಿದ್ದರು.