Saturday, April 17, 2021

ಅಪಹರಣಕ್ಕೊಳಗಾಗಿದ್ದ ನೈಜೀರಿಯಾ ಬೋರ್ಡಿಂಗ್ ಶಾಲೆಯ 279 ಬಾಲಕಿಯರ ಬಿಡುಗಡೆ

newsics.com
ಗುಸೌ(ನೈಜೀರಿಯಾ): ಬಂದೂಕುಧಾರಿಗಳ ತಂಡ ವಾಯವ್ಯ ಜಾಮ್ಫಾರಾ ರಾಜ್ಯದ ಬೋರ್ಡಿಂಗ್ ಶಾಲೆಯಿಂದ ಅಪಹರಿಸಿದ್ದ ನೂರಾರು ಶಾಲಾ ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಾಮ್ಫಾರಾ ರಾಜ್ಯಪಾಲ ಬೆಲ್ಲೊ ಮಟವಾಲ್ಲೆ ಮಂಗಳವಾರ(ಮಾ.2) ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಅಪಹರಣಗಳ ಸರಣಿಯಲ್ಲಿ ನಡೆದ ಇತ್ತೀಚಿನ ಘಟನೆ ಇದಾಗಿದೆ.
ಜಂಗೆಬೆ ಪಟ್ಟಣದ ಸರ್ಕಾರಿ ಬಾಲಕಿಯರ ಕಿರಿಯ ಮಾಧ್ಯಮಿಕ ಶಾಲೆಯಿಂದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿಸಿದ್ದರು. ಅದರಲ್ಲಿ 279 ಬಾಲಕಿಯರನ್ನು ಇಂದು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ ಎಂದು ಬೆಲ್ಲೊ ಮಟವಾಲ್ಲೆ ತಿಳಿಸಿದ್ದಾರೆ.
ಬಿಡುಗಡೆಯಾದ ಎಲ್ಲ 279 ಬಾಲಕಿಯರಲ್ಲಿ ನೂರಾರು ವಿದ್ಯಾರ್ಥಿನಿಯರು ಗುಸೌದಲ್ಲಿನ ರಾಜ್ಯ ಸರ್ಕಾರಿ ಗೃಹ ಕಚೇರಿಯಲ್ಲಿ ತಿಳಿನೀಲಿ ಹಿಜಬ್ ಧರಿಸಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ವಿದ್ಯಾರ್ಥಿಗಳನ್ನು ಸೆರೆಯಿಂದ ಬಿಡುಗಡೆ ಮಾಡುವುದನ್ನು ಘೋಷಿಸಲು ನನ್ನ ಹೃದಯ ಸಂತೋಷಪಡುತ್ತಿದೆ ಎಂದು ಮಟವಾಲ್ಲೆ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಕೋವಿಡ್ ರೋಗಿಯ ಮೇಲೆ ಅತ್ಯಾಚಾರ: ವಾರ್ಡ್ ಬಾಯ್ ಬಂಧನ

ಜಾಗತಿಕವಾಗಿ ಕೊರೋನಾ ಸೋಂಕು ಹೆಚ್ಚಳ; WHO ಆತಂಕ

ಪ್ರಯಾಣಿಕ ಅಸ್ವಸ್ಥ: ಕರಾಚಿಯಲ್ಲಿ ಇಳಿದ ಲಕ್ನೋ ವಿಮಾನ

ಸುಬ್ರಹ್ಮಣ್ಯ ಚಿಟ್ಟಾಣಿ ಆರೋಗ್ಯದಲ್ಲಿ ಚೇತರಿಕೆ

ಪೆಟ್ರೋಲ್, ಡೀಸೆಲ್ ದರ ತುಸು ಇಳಿಕೆ

ಮತ್ತಷ್ಟು ಅಗ್ಗವಾಯ್ತು ಚಿನ್ನ; 2 ದಿನಗಳಲ್ಲಿ 600 ರೂ. ಇಳಿಕೆ

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!