newsics.com
ಲಂಡನ್: ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಗೆ ಬಿಗ್ ರಿಲೀಫ್ ದೊರೆತಿದೆ. ಈ ಹಿಂದೆ ನೀಡಲಾಗಿದ್ದ ಗಡೀಪಾರು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಬ್ರಿಟನ್ ಹೈಕೋರ್ಟ್ ಅನುಮತಿ ನೀಡಿದೆ.
ಮಾನಸಿಕ ಆರೋಗ್ಯ ಸ್ಥಿತಿ ಮತ್ತು ಖಿನ್ನತೆ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಈ ಅವಕಾಶ ನೀಡಿದೆ.
ನೀರವ್ ಮೋದಿ ಪರ ವಕೀಲರು ಈ ಅಂಶಗಳ ಆಧಾರದಲ್ಲಿ ಎತ್ತಿರುವ ಪ್ರಶ್ನೆಗಳು ಪರಿಗಣಿಸಲು ಅರ್ಹವಾಗಿದೆ ಎಂದು ಬ್ರಿಟನ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭಾರತದ ಬ್ಯಾಂಕುಗಳಿಗೆ 10000 ಕೋಟಿ ರೂಪಾಯಿ ವಂಚಿಸಿದ ಆರೋಪವನ್ನು ನೀರವ್ ಮೋದಿ ಎದುರಿಸುತ್ತಿದ್ದಾನೆ