ಕೊಲಂಬೋ: ಮಾನವ ಹಕ್ಕಿನ ಉಲ್ಲಂಘನೆ ಹೆಸರಿನಲ್ಲಿ ಶ್ರೀಲಂಕಾದ ಸೇನಾ ಮುಖ್ಯಸ್ಥ ಸಿಲ್ವಾ ಮತ್ತು ಅವರ ಕುಟುಂಬ ಸದಸ್ಯರು ಅಮೆರಿಕ ಪ್ರವಾಸ ಕೈಗೊಳ್ಳದಂತೆ ನಿರ್ಭಂದ ವಿಧಿಸಿರುವ ಕ್ರಮವನ್ನು ಶ್ರೀಲಂಕಾ ಕಟುವಾಗಿ ಟೀಕಿಸಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅದು ಹೇಳಿದೆ. ಶ್ರೀಲಂಕಾದಲ್ಲಿ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಸಿಲ್ವಾ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಮೆರಿಕ ಆರೋಪಿಸಿದೆ